'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಹಿಟ್ ಆಗಿ, ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಇನ್ನು 'ಕಿರಿಕ್ ಪಾರ್ಟಿ' ಸಿನಿಮಾದ ಗೆಲುವಿನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೊಟ್ಟ ಹಾಡುಗಳ ಪಾತ್ರ ಅಪಾರವಾಗಿತ್ತು. ಅದರಲ್ಲಿಯೂ ಚಿತ್ರದ 'ಬೆಳಗೆದ್ದು..' ಹಾಡು ಹುಟ್ಟಿಸಿದ್ದ ಕ್ರೇಜ್ ನ ಇಂದಿಗೂ ನಿಂತಿಲ್ಲ. 'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು..' ಹಾಡು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಬಾರಿ ಕೇಳಿರುವ ಕನ್ನಡದ ಹಾಡಾಗಿದೆ. ಸಿನಿಮಾದ ಈ ಹಾಡು ಸದ್ಯ 50 ಮಿಲಿಯನ್ ಹಿಟ್ಸ್ ಪಡೆದಿದೆ.
Actor Rakshit Shetty's 'Kirik Party' kannada movie 'Belageddu' song has reached 50 million views in Youtube.